
1st April 2025
ವೇಗ ವಾಹಿನಿ
ಕಲಬುರಗಿ: ಡೀಸೆಲ್ ದರ ಲೀಟರಿಗೆ ₹2 ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರದ ನಿರ್ಧಾರವನ್ನು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಅವರು ಕಟುವಾಗಿ ಟೀಕಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ರಾಜ್ಯದ ಜನತೆಗೆ ಇನ್ನೊಂದು ಶಾಕ್ ನೀಡಿದೆ ಎಂದಿದ್ದಾರೆ.
ಕಳೆದ ಹತ್ತು ತಿಂಗಳಲ್ಲಿ ಡಿಸೇಲ್ ಪ್ರತಿ ಲೀಟರಿಗೆ ₹5 ಏರಿಕೆ ಭಾಗ್ಯ ಕೊಟ್ಟಿರುವ ರಾಜ್ಯ ಕಾಂಗ್ರೆಸ್ ಸರಕಾರ, ಯುಗಾದಿ ಹೊಸ ದಿನವೇ ಹೊಸ ಹೊಸ ದರ ವಿಧಿಸಿ ದರ ಬೀಜಾಸುರ ಸರಕಾರ ವಿಜೃಂಭಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ ನಿದ್ರೆಯಿಂದ ಜನರೆದ್ದರೆ ಸುಲಿಗೆ ಬರೆ ಹಾಕುತ್ತಿದೆ ಎಂದರು.
ಕೂಡಲೆ ಹಾಲಿನ ಹಾಗೂ ಡಿಸೆಲ್ ದರ್ ಏರಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ವೇಗ ವಾಹಿನಿ
ಕಲಬುರಗಿ:- ನಗರದ ಜಿಲ್ಲಾ ಪಂಚಾಯತ ಅವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಜಿಲ್ಲೆಯ ಭೂಪಾಲ ತೆಗನೂರ ಗ್ರಾಮ ಪಂಚಾಯತ ಅಭಿವದ್ಧಿ ಅಧಿಕಾರಿಯನ್ನು ಕೂಡಲೆ ಕೆಲಸದಿಂದ ವಜಾಗೊಳಿಸವ ಬಗ್ಗೆ ಜಿಲ್ಲಾ ಅಧ್ಯಕ್ಷರಾದ ಅಣವಿರಪ್ಪ ಎಸ್. ಹೆಬ್ಬಾಳ ಅವರ ಸಮುಖದಲ್ಲಿ ಮನವಿ ಪತ್ರ ಸಲ್ಲಿಸಿದ್ದರು .
ಬೊಮ್ಮಗೊಂಡೇಶ್ವರ ಉತ್ಸವದಲ್ಲಿ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿಕೆ ಬೊಮ್ಮಗೊಂಡೇಶ್ವರ ತತ್ವಗಳ ಪ್ರಚಾರ ಆಗಲಿ